ಕುಣಿಗಲ್ ಪಟ್ಟಣದಿಂದ ಶಾಸಕ ಡಾ. ಹೆಚ್. ಡಿ. ರಂಗನಾಥ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪುಣ್ಯ ಕ್ಷೇತ್ರ ಧರ್ಮಸ್ಟಳದಲ್ಲಿ ಮಂಜುನಾಥಸ್ವಾಮಿ ದರ್ಶನ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ಧರ್ಮಸ್ಥಳ ತಲುಪಿದ ಶಾಸಕ ರಂಗನಾಥ್ ಹಾಗೂ ನೂರಾರು ಬೆಂಬಲಿಗರು ದೇವರ ದರ್ಶನ ಮಾಡಿ ಎಸ್ ಐ ಟಿ ತನಿಖೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಶನಿವಾರ ಬೆಳಿಗ್ಗೆ ಸುಮಾರು 8 ರ ಸಮಯದಲ್ಲಿ ಪಟ್ಟಣದಿಂದ ನೂರಾರು ಕಾರುಗಳಲ್ಲಿ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಡಾ ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳ ತಲುಪಿದರು. ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐ ಟಿ ತನಿಖೆ ನಡೆಯುತ್ತಿದೆ. ಪ್ರಾಮಾಣಿಕವಾಗಿ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಕ್ಷೇತ್ರಕ್ಕೆ ಆಂಟಿರುವ ಕಳಂಕ ದೂರವಾಗಬೇಕು ಎಂದರು.