ಜಿಲ್ಲೆಯ ಕುರುಬ ಸಮುದಾಯದವರು ಜಾತಿ ಗಣತಿಯಲ್ಲಿ ಉಪಪಂಗಡಗಳನ್ನು ಕೈ ಬಿಟ್ಟು ಕುರುಬ ಎಂದು ಮಾತ್ರ ಸೇರ್ಪಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಾಮಚಂದ್ರಪ್ಪ ತಿಳಿಸಿದರು. ನಗರದ ಕನಕ ವಿದ್ಯಾರ್ಥಿ ಭವನದಲ್ಲಿ ಶುಕ್ರವಾರ ನಡೆದ ಜಾತಿ ಗಣತಿ ಅರಿವು ಮೂಡಿಸುವ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿಯೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮೀಕ್ಷೆ ಕೈಗೊಳ್ಳ ಬೇಕೆಂದು ಆದೇಶಿಸಿದೆ. ಕುರುಬ ಸಮುದಾಯದ ದಲ್ಲಿ ಹಲವು ಉಪ ಪಂಗಡಗಳನ್ನು ಸೇರ್ಪಡೆ ಮಾಡುವ ಮೂಲಕ ಗೊಂದಲವುಂಟು ಮಾಡಲಾಗಿದೆ, ಇದರಿಂದಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ, ಎಲ್ಲರೂ ಉಪ ಪಂಗಡಗಳನ್ನು ದೂರವಿಟ್ಟು ಸಮೀಕ್ಷೆಯಲ್ಲಿ ಕುರುಬ ಎಂದು ಮಾತ್ರ ಬೇಕುಎಂದ್ರು