ತುಮಕೂರು ದಸರಾ ವೇಳೆ ಪಂಜಿನ ಮೆರವಣಿಗೆ ನಡೆಸಲು ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಕೆ ಮಾಡಿದರೆ ಅಲ್ಲಿನ ಸಿಂಥಟಿಕ್ ಟ್ರ್ಯಾಕ್ ಹಾನಿಯಾಗಲಿದೆ ಎನ್ನುವುದು ಕ್ರೀಡಾ ಪ್ರೇಮಿಗಳ ಕಳಕಳಿಯಾಗಿದೆ. ನಾಡ ಹಬ್ಬ ದಸರಾ ತುಮಕೂರಿನಲ್ಲಿ ವೈಭವವಾಗಿ ನಡೆಸಬೇಕು ಎನ್ನುವ ಜಿಲ್ಲಾಡಳಿತ ಹಾಗೂ ಸರ್ಕಾರದ ನಿಲುವು ಸ್ವಾಗತಾರ್ಹ ಆದರೆ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಂಜಿನ ಮೆರವಣಿಗೆ ಮಾಡುವುದಕ್ಕೆ ನಗರ ನಾಗರಿಕರ ವಿರೋಧವಿದೆ. ಕ್ರೀಡೆಗಷ್ಟೇ ಸೀಮಿತ ವಾಗಿರಬೇಕಾದ ಕ್ರೀಡಾಂಗಣವನ್ನ ದಸರಾ ಪಂಜಿನ ಮೆರವಣಿಗೆ ನಡೆಸಲು ಬಳಕೆ ಮಾಡುವುದರಿಂದ ಅಲ್ಲಿನ ಹುಲ್ಲು ಹಾಸು ಹಾಗೂ ಸಿಂಥಟಿಕ್ ಟ್ರ್ಯಾಕ್ ಗೆ ಹಾನಿಯಾಗಲಿದೆ. ಪಂಜಿಗೆ ಎಣ್ಣೆ ಹಾಕುವಾಗ ಕೆಳಗೆ ಬೀಳಲೂಬಹುದು. ಇದರಿಂದ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ.