ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ಭೀಮಣ್ಣ ಎಂಬ ಯುವಕನನ್ನು ಯಾರೋ ಕೊಲೆ ಮಾಡಿ ನಾರಾಯಣಪುರ ಗ್ರಾಮದ ಬಳಿಯ ಬೋರುಕಾ ವಿದ್ಯುತ್ ಸ್ಥಾವರದ ಬಳಿ ಕಾಲುವೆಯಲ್ಲಿ ಬಿಸಾಕಿದ್ದು ಭೀಮಣ್ಣನ ಕುಟುಂಬ ಈಗ ತುಂಬಾ ತೊಂದರೆಯಲ್ಲಿದ್ದು ಸರಕಾರದಿಂದ ಪರಿಹಾರ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಲಾಗಿದೆ. ಶುಕ್ರವಾರ ಮಧ್ಯಾನ ಸುರಪುರ ನಗರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ದಲಿತ ವಿಮೋಚನಾ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಡಿಮಟ್ಟಿ,ತಾಲೂಕ ಅಧ್ಯಕ್ಷ ಶರಣಪ್ಪ ಅನುಸೂರ,ಆನಂದ ವಿಶ್ವಕರ್ಮ ಲಕ್ಷ್ಮಿಪುರ ಸೇರಿದಂತೆ ಅನೇಕರು ಭಾಗವಹಿಸಿ ಮನವಿ ಸಲ್ಲಿಸಿ ತಾಯಿಸಿದ್ದಾರೆ.