ತುಂಗಭದ್ರಾ ಜಲಾಶಯ ದಿಂದ 30 ಟಿಎಂಸಿ ನೀರನ್ನು ಬಳಸುವ ಕುರಿತು ಆಂಧ್ರಪ್ರದೇಶ ಸಿಎಂ ಅವರನ್ನು ಸಮಯ ಕೇಳುತ್ತಿದ್ದೇವೆ ಅವರು ಸಮಯ ನೀಡಿದ ನಂತರ ನವಲಿ ಸಮನಾಂತರ ಜಲಾಶಯದ ಬಗ್ಗೆ ಮಾತನಾಡುವೇ ಎಂದು ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಸೆಪ್ಟೆಂಬರ್ 06 ರಂದು ಸಂಜೆ 4-30 ಗಂಟೆಗೆ ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ