ಖಿನ್ನತೆಯಿಂದ ಬಳಲುತ್ತಿದ್ದ ಯುವಕನೋರ್ವ ನಾಲೆಗೆ ಹಾರಿ ಅಸುನೀಗಿದ ಘಟನೆ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರದ ಕಬಿನಿ ನಾಲೆಯಲ್ಲಿ ನಡೆದಿದ್ದು ಆತನ ಕೊನೆ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಳ್ಳೇಗಾಲ ಪಟ್ಟಣದ ಜಿ.ಪಿ.ಮಲ್ಲಪ್ಪುರಂನ ಲೋಕೇಶ್ ಎಂಬವರ ಪುತ್ರ ಪ್ರೀತಂ ಮೃತ ದುರ್ದೈವಿ. ಈತ ಐಟಿಐ ವ್ಯಾಸಂಗ ಮಾಡುತ್ತಿದ್ದು 4-5 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ತಂದೆ-ತಾಯಿ ಕೆಲಸಕ್ಕೆ ತೆರಳಿದ್ದಾಗ ಈತ ಕಳೆದ ಶನಿವಾರ ತಿಮ್ಮರಾಜಿಪುರದ ಕಬಿನಿ ನಾಲೆಗೆ ಇಳಿದು ಮೇಲೆಳಲಾಗದೇ ಮೃತಪಟ್ಟಿದ್ದು ಈತನ ಶವ ಸೋಮವಾರ ಪತ್ತೆಯಾಗಿದೆ. ಕಬಿನಿ ನಾಲೆ ದಡದಲ್ಲಿ ಕುಳಿತು ಈತ ನಾಲೆಗೆ ಹಾರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈತ ನಾಲೆಗೆ ಇಳಿದ ಕೂಡಲೇ ಮೇಲೇಳಲಾಗದೇ ಒದ್ದಾಡುವುದು ದೃಶ್ಯದಲ್ಲಿದೆ