Download Now Banner

This browser does not support the video element.

ಕಾರವಾರ: ಕೇಣಿ ಬಂದರು ನಿರ್ಮಾಣ ಕುರಿತು ಆ.22ರಂದು ಅಂಕೋಲಾದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ, ಸಂಚಾರ ನಿಷೇಧ

Karwar, Uttara Kannada | Aug 21, 2025
ಅಂಕೋಲಾ ತಾಲೂಕಿನ ಭಾವಿಕೇರಿ-ಕೇಣಿ ಗ್ರಾಮದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಕುರಿತು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಗಸ್ಟ್ 22 ರಂದು ಸಾರ್ವಜನಿಕ ಅಹವಾಲು ಸ್ವೀಕರಿಸುವ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ವಾಣಿಜ್ಯ ಬಂದರು ನಿರ್ಮಾಣದ ಪರವಾಗಿ ಮತ್ತು ವಿರೋಧವಾಗಿ ಸ್ಥಳೀಯರು ಮತ್ತು ಹೊರಗಿನವರು ಅವರ ಅಹವಾಲುಗಳನ್ನು ಸಲ್ಲಿಸಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸೇರುವ ಸಾಧ್ಯತೆ ಇದೆ. ಈ ವೇಳೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ದೃಷ್ಠಿಯಿಂದ ಅಂಕೋಲಾ ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಸುಂದರ ನಾರಾಯಣ ದೇವಸ್ಥಾನ ಪಿಕಾಕ್ ಬಾರ್ ವರೆಗಿನ ರಸ್ತೆಯಲ್ಲಿ ಸಂಚಾರ ಮತ್ತು ವಾಹನಗಳ ಪಾರ್ಕಿಂಗ್ ಮಾಡುವುದನ್ನು ನಿಷೇಧ ಮಾಡಲಾಗಿದೆ
Read More News
T & CPrivacy PolicyContact Us