ತಾಲೂಕಿನ ಗೂಳೂರು ಮಠದ ರತು ವೃದ್ಧಾಶ್ರದಮದಲ್ಲಿ ಶುಕ್ರವಾರ ಮೆಗಾಸ್ಟಾರ್ ಚಿರಂಜೀವಿ ಜನುಮ ದಿನದ ಪ್ರಯುಕ್ತ ಮೆಗಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಬಳಗದ ವತಿಯಿಂದ ಕೇಕ್ ಕತ್ತರಿಸಿ, ವೃದ್ಧರಿಗೆ ಕಂಬಳಿಗಳನ್ನು ವಿತರಿಸಿ,ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ವೇಳೆ ಚಿರಂಜೀವಿ ಅಭಿಮಾನಿ ಹಾಗೂ ಆರ್ ಟಿಒ ಅಧಿಕಾರಿ ಕಮಲ ಬಾಬು ಮಾತನಾಡಿ, ನಮ್ಮ ಅಭಿಮಾನಿ ನಟ ಚಿರಂಜೀವಿಯವರ 70ನೇ ಜನುಮದಿನ ಆಚರಿಸುತ್ತಿದ್ದು, ಅವರನ್ನು ನೋಡಿದರೆ ಹೆಮ್ಮೆ ಅನಿಸುತ್ತದೆ. ಅವರು ಸಿನಿಮಾದಲ್ಲಷ್ಟೇ ಹೀರೋ ಅಲ್ಲದೆ ಬಹಳಷ್ಟು ಬಡವರ ಬದುಕಿನಲ್ಲೂ ಹೀರೋ ಆಗಿದ್ದಾರೆ. ಅವರ ಸಾಮಾಜಿಕ ಬದ್ಧತೆ,ಸದಾ ಒಳಿತನ್ನೆ ಬಯಸುವ ಮೃದು ಮನಸಿನವರಾಗಿದ್ದಾರೆೆ ಎಂದರು.