ನೀನು ಜಾಸ್ತಿ ಮಾತನಾಡಬೇಡ, ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ, ಬಿಇಓ ವಿರುದ್ಧ ಹರಿಹಾಯ್ದ ಶಾಸಕ ಎಚ್.ಕೆ.ಸುರೇಶ್ ಬೇಲೂರು: ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ 17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಶಾಸಕ ಎಚ್.ಕೆ. ಸುರೇಶ್ ಕೆಂಡಾಮಂಡಲರಾದರು.ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು ಆಯೋಜನೆಗೊಂಡಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಚ್.ಕೆ. ಸುರೇಶ್ ಹಾಗೂ ಬಿಇಓ ರಾಜೇಗೌಡರ ನಡುವೆ ತೀವ್ರ ವಾಗ್ವಾದ ಜರುಗಿತು. ವೇದಿಕೆಯಲ್ಲಿ ಶಾಸಕರು ಬಿಇಓ ವಿರುದ್ಧ “ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ, ಶಿಕ್ಷಕರಿಗೆ ಚಿತ್ರಹಿಂಸೆ ಕೊ