ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆಶಿ ಹೇಳಿಕೆಗೆ ಸಂಬಂಧಿಸಿ ಮಲ್ಲೇಶ್ವರಂನಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಹೇಳಿಕೆಯನ್ನ ಶಾಸಕ ಅಶ್ವಥ್ ನಾರಾಯಣ ಖಂಡನೆ ಮಾಡಿದರು. ಸೂಕ್ಷ್ಮತೆ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಉಪಮುಖ್ಯಮಂತ್ರಿಗಳು ಮಾತಾಡಬೇಕು. ಜವಾಬ್ದಾರಿ ಮರೆತು ಮನಬಂದಂತೆ ಡಿಕೆಶಿ ಅವರು ಮಾತಾಡ್ತಿದ್ದಾರೆ. ಈಗಾಗಲೇ ಈ ವಿಚಾರದಲ್ಲಿ ಪ್ರಮೋದಾದೇವಿಯವ್ರು ಹಾಗೂ ಯದುವೀರ್, ಪ್ರತಾಪ್ ಸಿಂಹ ಮಾತಾಡಿದ್ದಾರೆ ಎಂದರು.