ಗ್ರಹಣ ಕಾಲದಲ್ಲಿ ಊಟ ಮಾಡಬಾರದು ಅನಿಷ್ಟ ಅನ್ನೋದು ಕೆಲವರ ನಂಬಿಕೆ. ಆದರೆ ಇದು ಮೂಢನಂಬಿಕೆ ಅನ್ನೋದು ಕೆಲವರ ವಾದ. ಹೀಗಾಗಿ ಬಾಗೇಪಲ್ಲಿ ಪಟ್ಟಣದಲ್ಲಿ ಚಂದ್ರ ಗ್ರಹಣ ವೇಳೆ ಚಿಕನ್ ಕಬಾಬ್ ತಿಂದು ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಖಗ್ರಾಸ ಚಂದ್ರಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಕೆಲವರ ನಂಬಿಕೆ. ಆದ್ರೆ, ಇದು ಮೌಢ್ಯ ಆಚರಣೆ ಅನ್ನೋದು ಕೆಲವು ಪ್ರಗತಿಪರರ ವಾದ. ಹೀಗಾಗಿ ಗೂಳೂರು ವೃತ್ತದಲ್ಲಿ ಬಳಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 100ಕ್ಕೂ ಹೆಚ್ಚು ಮಂದಿ ಪ್ರಗತಿಪರರು ಬಗೆ ಬಗೆಯ ಆಹಾರವನ್ನ ಸೇವಿಸಿ ಜಾಗೃತಿಯನ್ನ ಮೂಡಿಸಿದರು. ಚಂದ್ರ ಗ್ರಹಣ ವೇಳೆಯಲ್ಲಿ ಊಟ ತಿನ್ನಿಸುತ್ತಾ ಮೌಢ್ಯಗಳ ವಿರುದ್ಧ ಸೆಡ್ಡು ಹೊಡೆದರು.