ತಾಲೂಕಿನ ಸಾತ್ ಮೈಲ್ ಕ್ರಾಸ್ ಬಳಿ ಬೀದಿ ನಾಯಿಗಳ ಕಾಟ ಹೇಳತೀರದಾಗಿದ್ದು, ತಂಡೋಪತಂಡವಾಗಿ ಬೀದಿ ನಾಯಿಗಳು ಗ್ರಾಮದೊಳಗೆ ದಾಂಗುಡಿಯಿಡುತ್ತಿವೆ. ಆಗಸ್ಟ್ 27 ರ ಬುಧವಾರ ಸಂಜೆ ಸಾತ್ ಮೈಲ್‌ಕ್ರಾಸ್ ಬಳಿಯ ಮುಖ್ಯ ರಸ್ತೆಯ ಬದಿಯಲ್ಲಿ ಹತ್ತಾರು ನಾಯಿಗಳು ಗುಂಪುಗೂಡಿ ಓಡಾಡುತ್ತಿದ್ದನ್ನು ಕಂಡು ಜನರು ಭಯಭೀತರಾಗಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸುವಂತೆ ಸ್ಥಳೀಯರಾದ ವೆಂಕಟೇಶ ಗ್ರಾಮ ಪಂಚಾಯತಿಗೆ ಆಗ್ರಹಿಸಿದ್ದಾರೆ