ಕೊಳ್ಳೇಗಾಲ:ತಾಲೂಕಿನ ಮಧುವನಹಳ್ಳಿ ಬಳಿ ಇರುವ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ನಕ್ಷತ್ರ ಆಮೆ ಸಾಗಣೆ ಮಾಡುತ್ತಿದ್ದ ಮಹದೇಶ್ವರ ಬೆಟ್ಟ ಮೂಲದ ಆರೋಪಿಯನ್ನು ಕೊಳ್ಳೇಗಾಲ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಜೀವಂತ ನಕ್ಷತ್ರ ಆಮೆ ವಶಪಡಿಸಿಕೊಳ್ಳಲಾಗಿದೆ. ಮಲೆಮಹದೇಶ್ವರಬೆಟ್ಟದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜು (35) ಎಂಬಾತನೇ ಬಂಧಿತನಾಗಿದ್ದು, ಈತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.ಕೊಳ್ಳೇಗಾಲ ತಾಲೂಕಿನ ಮದುನಹಳ್ಳಿ ಗ್ರಾಮ ಕಡೆಗೆ ನಕ್ಷತ್ರ ಆಮೆಯನ್ನು ಮಾರಾಟ ಸಲುವಾಗಿ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಸಂಚಾರಿ ದಳದ ಪೋಲೀಸ್ ಇನ್ಸಪೇಕ್ಟರ್ ವಿಜಯರಾಜ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ