ದ್ವಿಚಕ್ರ ವಾಹನ ಚಾಲಕರಿಗೆ ಗುಲಾಬಿ ಹೂವು ನೀಡುವ ಮೂಲಕ ಆತ್ಮರಕ್ಷಣೆಯ ಸಲುವಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ರಸ್ತೆ ಸಂಚಾರ ನೀತಿ ನಿಯಮಗಳನ್ನು ಪಾಲಿಸುವಂತೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ನಡೆಸಿರುವ ಕುರಿತು ಬೀರೂರು ಠಾಣಾ ವ್ಯಾಪ್ತಿಯ ಬೀರೂರು ಪಟ್ಟಣದ ಎನ್‌ಹೆಚ್ -206 ರಸ್ತೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‌ಐ ತಿಪ್ಪೇಶ್ ನಾಯ್ಕ್ ಮತ್ತು ಸಿಬ್ಬಂದಿಗಳು ವಿಶೇಷ ಅಭಿಯಾನ ನಡೆಸಿದ್ದು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಗುಲಾಬಿ ಹೂಗಳನ್ನು ನೀಡಿ ತಲೆಗೆ ಹೆಲ್ಮೆಟ್ ಇಟ್ಟು ಅಭಿಯಾನ ನಡೆಸಿದರು.