ಗುಂಡಾಲ್ ಜಲಾಶಯಕ್ಕೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಮತ್ತು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಒಟ್ಟಾಗಿ ಭಾಗಿನ ಅರ್ಪಿಸಿದ ಶಾಸಕರು ಕಬಿನಿ ನಾಲೆಗಳ ಅಭಿವೃದ್ಧಿಗೆ 500 ಕೋಟಿ ಬೇಡಿಕೆಯನ್ನು ಸರಕಾರಕ್ಕೆ ಇಟ್ಟಿದ್ದಾರೆ ಈ ಸಂದರ್ಭ ಮಾತನಾಡಿದ ಕೊಳ್ಳೇಗಾಲ ಶಾಸಕರಾದ ಕೃಷ್ಣಮೂರ್ತಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಸಕ್ತಿಯಿಂದ ಹನೂರು ಕೊಳ್ಳೇಗಾಲ ಕ್ಷೇತ್ರಗಳಲ್ಲಿನನೀರಾವರಿ ಯೋಜನೆಗಳಿಗೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ,ಗುಂಡಾಲ್ ಜಲಾಶಯ ಅಭಿವೃದ್ಧಿಗೆ ₹50 ಕೋಟಿ ಕಣ್ಣೆಗಾಲ ನೀರಾವರಿ ಯೋಜನೆಗೆ ₹70 ಕೋಟಿ ಒಟ್ಟು ₹120 ಕೋಟಿ ಅನುದಾನ ಮಂಜೂರು ಮಾಡಲಾಗಿದೆಎಂದರು