ಸರ್ಕಾರಿ ಕಾರ್ಯಕ್ರಮ ಆಯೋಜನೆ ವಿಷಯದಲ್ಲಿ ಶಿಷ್ಟಾಚಾರ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ್ ಅವರು ಶುಕ್ರವಾರ ಸಂಜೆ 4:30ಕ್ಕೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರಿಗೆ ಒತ್ತಾಯಿಸಿದರು. ಈಚೆಗೆ ಹುಮ್ನಾಬಾದ್ ನಲ್ಲಿ ಆಯೋಜಿಸಿದ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಹೋದರು ಆಗಲೇ ಎಂಎಲ್ಸಿ ಅವರು ಮಾತನಾಡಲು ಆರಂಭ ಮಾಡಿದ್ರು, ಮತ್ತೊಂದು ವನಮೋತ್ಸವ ಕಾರ್ಯಕ್ರಮಕ್ಕೆ ನಾನು ಹೋಗುವುದಕ್ಕೆ ಮುನ್ನವೇ ಸಸಿಗೆ ನೀಡಿರೆದು ಅಲ್ಲಿಂದ ತೆರಳಿದ್ರು, ಪರಿಸ್ಥಿತಿ ಹೀಗಾದ್ರೆ ಏನರ್ಥ? ಶಾಸಕ ಡಾ. ಸಿದ್ದು ಪಾಟೀಲ ಪ್ರಶ್ನಿಸಿದರು.