ಚಿಕ್ಕಮಗಳೂರು ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಸಾಮೂಹಿಕ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಪೊಲೀಸ್ ಕ್ವಾಟ್ರಸ್ ನಿಂದ ಹೊರಟ ಮೆರವಣಿಗೆ ಎಂಜಿ ರಸ್ತೆ ಮಾರ್ಗವಾಗಿ ಹೊರಟು ಕೋಟೆ ಕೆರೆಗೆ ವಿಸರ್ಜಿಸಲಾಯಿತು, ಶ್ರದ್ಧಾಭಕ್ತಿ ಅಭಿಮಾನಿಗಳ ಅಬ್ಬರ ಜನಜಂಗುಳಿಗೆ ಈ ಮೆರವಣಿಗೆ ಸಾಕ್ಷಿಯಾಯಿತು. ಪೊಲೀಸ್ ಸಿಬ್ಬಂದಿ, ಯುವಕ ಯುವತಿಯರು ಬ್ಯಾಂಡ್ ವಾದ್ಯಕ್ಕೆ ನೃತ್ಯ ಮಾಡುವುದರ ಮೂಲಕ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು.