ಮದ್ದೂರು : ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಹಾಗೂ ಹಿಂದೂ ಕಾರ್ಯ ಕರ್ತರ ಮೇಲಿನ ಲಾಠಿಚಾಜ್೯ ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ ಮದ್ದೂರು ಬಂದ್ ಗೆ ಕರೆ ನೀಡಿವೆ. ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ನಡೆಯುವ ಮದ್ದೂರು ಬಂದ್ ನಲ್ಲಿ ಎಲ್ಲಾ ವರ್ತಕರು ವಾಣಿಜ್ಯ ಸಂಸ್ಥೆಯ ವರು ತಮ್ಮ ಅಂಗಡಿ ಮುಂಗಟ್ಟು ಹೋಟೆಲ್ ಗಳು ವಾಣಿಜ್ಯ ಸಂಸ್ಥೆ ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಸೋಮ ವಾರ ಸಾಯಂಕಾಲ 5 ಗಂಟೆ ಸಮಯದಲ್ಲಿ ಸಂಘಟನೆಗಳು ಮನವಿ ಮಾಡಿವೆ.