ಬಿಡಿಎ ಎಂಬ ರಾಕ್ಷಸ, ಭೂತನ ಕಣ್ಣು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಫಲವತ್ತಾದ ಭೂಮಿ ಮೇಲೆ ಬಿದ್ದಿದೆ ಎಂದು ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾದ್ಯಕ್ಷ ನದೀಮ್ ಪಾಷ ಆರೋಪಿಸಿದರು. ಹಾರೋಹಳ್ಳಿಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ನಮ್ಮ ಭೂಮಿಯೊಳಗೆ ನುಗ್ಗುವ ಮುಂಚೆ ರೈತರೆಲ್ಲ ಎಚ್ಚೆತ್ತುಕೊಳ್ಳಿ ರೈತರ ಫಲವತ್ತಾದ ಭೂಮಿಯನ್ನು ಸ್ವಾದಿನಕ್ಕೆ ಪಡೆದುಕೊಳ್ಳಲು ಪಟ್ಟಿಯನ್ನು ತಯಾರಿಸುವ ಮುಂಚೆ ರೈತರೊಂದಿಗೆ ಸಮಾಲೋಚನೆ ಸಭೆಯನ್ನು ಆಯೋಜಿಸಿ ರೈತರ ಅಭಿಪ್ರಾಯ ಹಾಗೂ ಸಲಹೆಯನ್ನು ಪಡೆದು ರೈತರು ಒಪ್ಪಿದ ನಂತರ ಮುಂದಿನ ಕ್ರಮಕ್ಕೆ ಮುಂದಾಗ ಬೇಕೆಂದು ಒತ್ತಾಯಿಸಿದರು.