ಚಿಂತಾಮಣಿ ನಗರದಲ್ಲಿ ನಗರಸಭೆಯ ಪೌರಾಯುಕ್ತ ಜಿ.ಎನ್ ಚಲಪತಿ ಹಲವು ವಾರ್ಡ್ ಗಳಿಗೆ ಇಂದು ಭೇಟಿ ನೀಡಿದರು.ಈ ವೇಳೆ ಮಾತನಾಡಿ ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಅದರ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರ ನಿರ್ದೇಶನದಂತೆ ನಗರದ ಪ್ರತಿ ವಾರ್ಡಿಗೆ ಒಂದೊಂದು ವಾಹನವನ್ನು ಏರ್ಪಡಿಸಲಾಗಿದೆ. ಹಾಗೂ ನಾಗರಿಕರು ಯಾವ ಸಮಯಕ್ಕೆ ವಾಹನ ಬರಬೇಕು ಎಂಬ ಬೇಡಿಕೆ ಇಟ್ಟರೆ ಅದೇ ಸಮಯಕ್ಕೆ ವಾಹನವನ್ನು ಕಳುಹಿಸಲಾಗುತ್ತದೆ. ಹಾಗಾಗಿ ಕಸವನ್ನ ಸಮರ್ಪಕ ರೀತಿಯಲ್ಲಿ ವಿಂಗಡಿಸಿ ನಗರಸಭೆಯ ವಾಹನಕ್ಕೆ ನೀಡಬೇಕು ಎಂದರು. ಒಂದು ವೇಳೆ ಉಲ್ಲಂಘನೆ ಮಾಡಿ ಕಸ ಎಲ್ಲೆಂದರಲ್ಲೆ ಬಿಸಾಡಿದರೆ ದಂಡ ವಿಧಿಸಿ,ನಗರಸಭೆಯಿಂದ ದೊರೆಯುವಂತಹ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.