ನೆಲ್ಯಾಡಿ ಬಳಿಯ ಕೋಲ್ಪೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಸಾಕ್ ಫೈಝಿ ಅವರಿಗೆ ಜಮಾಅತ್ ವತಿಯಿಂದ ಮಾರುತಿ ವ್ಯಾಗನರ್ ಕಾರು ಉಡುಗೊರೆಯಾಗಿ ನೀಡಲಾಯಿತು. SKSSF ಮಾಜಿ ಜಿಲ್ಲಾಧ್ಯಕ್ಷ ಇಸಾಕ್ ಫೈಝಿ ಒಂದೂವರೆ ವರ್ಷದಿಂದ ಕೋಲ್ಪೆ ಮಸೀದಿಯಲ್ಲಿ ಖತೀಬ್ ಆಗಿ ಕರ್ತವ್ಯ ನಿರ್ವಹಿಸಿದ್ದು ಅವರ ಮಾದರಿ ಸೇವೆಗೆ ಜಮಾಅತ್ ವತಿಯಿಂದ ಎಂಟೂವರೆ ಲಕ್ಷ ರೂ. ಮೌಲ್ಯದ ವ್ಯಾಗನರ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಉಪ್ಪಿನಂಗಡಿಯ ಮಾರುತಿ ಷೋ ರೂಂ ನಿಂದ ಹೊಸ ಕಾರನ್ನು ಇಸಾಕ್ ಫೈಝಿ ಪಡೆದುಕೊಂಡಿದ್ದಾರೆ.