ಜಿಲ್ಲೆ ಜನತೆಯ ಕ್ಷಮೆ ಕೇಳದೆ ಹಾಗೂ 2.50 ಕೋಟಿ ರೂ.ಗೆ ಲೆಕ್ಕ ಕೊಡದೇ ಸ್ಮರಣ ಸಂಚಿಕೆ ಬಿಡುಗಡೆಗೆ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಆಗಮಿಸಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ.ಜಯಪ್ರಕಾಶ್ ಗೌಡ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 24ರಂದು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ``ಬೆಲ್ಲದಾರತಿ'' ಸ್ಮರಣ ಸಂಚಿಕೆ ಬಿಡುಗಡೆಗೆ ಜಿಲ್ಲಾಡಳಿತ ಮಹೇಶ್ ಜೋಶಿಗೆ ಆಹ್ವಾನ ನೀಡಿರುವುದು ತಿಳಿದು ಬಂದಿದೆ ಎಂದರು. ಮಹೇಶ್ ಜೋಶಿ ಜಿಲ್ಲೆಯ ಜನತೆಗೆ ಹಾಗೂ ಹಿರಿಯ ಸಾಹಿತಿಗಳು ಮತ್ತು ಸಮ್ಮೇಳನದ ಸಂಘಟಕರಿಗೆ ಅವಮಾನ ಮಾಡಿದ್ದಾರೆ. ಸಮ್ಮೇಳನದ ವೇಳೆ ಕಸಾಪಗೆ ನೀಡಿದ 2.50 ಕೋಟಿ ರೂ ಹಣದ ಲೆಕ್ಕ ನೀಡಿಲ್ಲ ಎಂದರು.