ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗವಿಗಟ್ಟ ಹಾಗೂ ಆಲ್ದಾಳ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಸತತ ಮಳೆಯಿಂದಾಗಿ ಹಳ್ಳ ಮೈದುಂಬಿ ಹರಿಯುವ ಸನಿಹದಲ್ಲಿದ್ದು, ಸಂಪೂರ್ಣ ಭರ್ತಿಯಾದರೆ, ಬಲ್ಲಟಗಿ, ಬಸವಣ್ಣ ಕ್ಯಾಂಪ್ ಸೇರಿದಂತೆ ಅನೇಕ ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಸ್ಥಗಿತಗೊಳ್ಳಲಿದೆ. ಮುಂದಿನ ಇನ್ನೆರಡು ದಿನಗಳ ಕಾಲವೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚಾರ ಮಾಡಬೇಕಿದೆ. ಸೆ.13 ರ ಶನಿವಾರ ಬೆಳಗಿನ ಜಾವ ಹಳ್ಳ ತುಂಬುವ ಸಂಭವದಲ್ಲಿದ್ದು ರಭಸವಾಗಿ ನೀರು ಹರಿಯಿತು. ಹಳ್ಳಕ್ಕೆ ಸೇತುವೆ ಕಟ್ಟಬೇಕೆಂದು ಬಲ್ಲಟಗಿ ಗ್ರಾಮದ ವೀರೇಶ್ ಒತ್ತಾಯಿಸಿದ್ದಾರೆ.