ಮಾವಿನಕೆರೆ" ಗಾರ್ಡನ್ ನಲ್ಲಿ ಹಂದಿಗಳ ಕಾಟ ಸಾರ್ವಜನಿಕರನ್ನ ಸಾಕು ಸಾಕು ಮಾಡಿದೆ. ಮಾವಿನಕೆರೆ ಅಭಿವೃದ್ಧಿಗೆ ಮುಂದಾಗಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮುತುವರ್ಜಿವಹಿಸಬೇಕು ಎಂದು ಮಾವಿನಕೆರೆ ವಾಕಿಂಗ್ ಗೆಳೆಯರ ಬಳಗದ ಮುಖಂಡ ರಾಮಣ್ಣ ಮನವಿ ಮಾಡಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವವರಿಗೆ ಹಂದಿಗಳು ಕಿರಿಕಿರಿ ಮಾಡುತ್ತವೆ. ಗಾರ್ಡನ್ ನಲ್ಲಿ ಸುತ್ತಾಡಿ ಹೊಲಸೆಬ್ಬಿಸುತ್ತಿವೆ. ವಾಕಿಂಗ್ ಮಾಡಲೂ ಸಹ ಆಗದಂತೆ ಹಂದಿಗಳ ಗುಂಪು ಓಡೋಡಿ ಬರುತ್ತವೆ. ಕೂಡಲೇ ಹಂದಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ರಾಮಣ್ಣ ಅವರು ಆಗಸ್ಟ್ 28 ರ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಪಬ್ಲಿಕ್ ಆಪ್ ಜೊತೆ ಮಾತನಾಡಿದ್ದಾರೆ.