ಕಲಬುರಗಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಮುಷ್ಕರ ನಡೆಸ್ತಿರೋ ಹಿನ್ನಲೆಯಲ್ಲಿ ಶೇ 20 ರಷ್ಟು ಮಾತ್ರ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾದ ಹಿನ್ನಲೆಯಲ್ಲಿ, ಪ್ರಯಾಣಿಕರ ಹಿತದೃಷ್ಟಿಯಿಂದ ಖಾಸಗಿ ಸಂಸ್ಥೆಗಳ ಬಸ್‌ಗಳು ರಸ್ತೆಗಿಳಿದಿವೆ. ಆಗಷ್ಟ್ 5 ರಂದು ಬೆಳಗ್ಗೆ 9 ಗಂಟೆಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು, ಹಾಗೂ ಕ್ರೂಸರ್‌ಗಳು ಸೇವೆ ಆರಂಭಸಿವೆ.. ಬೀದರ್, ಶಹಾಪುರ, ಸುರಪುರ, ರಾಯಚೂರು, ವಿಜಯಪುರ ಸೇರಿದಂತೆ ಇನ್ನಿತರ ಕಡೆ ಖಾಸಗಿ ವಾಹನಗಳು ಸಂಚಾರ ಆರಂಭಸಿವೆ. ಇನ್ನೂ ಸಾರಿಗೆ ಸಂಸ್ಥೆ ನಿಗದಿಪಡಿಸಿದ ದರವನ್ನೆ ಖಾಸಗಿ ವಾಹನಗಳು ಪಡೆದುಕೊಳ್ಳಬೇಕು ಅಂತಾ ಪೊಲೀಸರು ಮತ್ತು ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಚಿಸಿದ್ದಾರೆ.