ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಜಮೀನಿಗೆ ನೀರು ಹರಿಸುವ ವಿಚಾರಕ್ಕೆ ಗಲಾಟೆ ನಡೆದು ತಮ್ಮಂದಿರೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮುಂಡರಗಿ ಗ್ರಾಮದ ಬಾಷುಮಿಯಾ ಎನ್ನುವ 48 ವರ್ಷದ ವ್ಯಕ್ತಿ ತನ್ನ ಜಮೀನಿನ ಭತ್ತದ ಬೆಳೆಗೆ ನೀರು ಹರಿಸಿದ್ದ, ಇವರ ಜಮೀನಿನ ಪಕ್ಕದಲ್ಲಿಯೇ ಇದ್ದ ತಮ್ಮನಾದ ಅಬ್ದುಲ್ ಸಾಬ್ ಮತ್ತು ಅವರ ತಮ್ಮ ಹಾಜಿ ಬಾಬು ಇಬ್ಬರು ಸೇರಿ ತಮ್ಮ ಜಮೀನಿಗೆ ಅಣ್ಣನ ಜಮೀನಿನಲ್ಲಿಯೇ ನೀರು ಬಂದಿವೆ ಎಂದು ಅಣ್ಣನ ಮೇಲೆ ಹಲ್ಲೆ ಮಾಡಿದ್ದರೆ. ನಂತರ ಎದೆ ಮತ್ತು ಬೆನ್ನಿನ ಭಾಗಕ್ಕೆ ಬಲವಾಗಿ ಗೊತ್ತಿದ್ದರಿಂದ ಬಾಷುಮಿಯಾ ಮೃತಪಟ್ಟಿದ್ದಾನೆ ಎಂದು ಮೃತನ ಪತ್ನಿ ಆರೋಪಿಸಿ ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.