ಚಾಮರಾಜನಗರ ನಗರಸಭಾ ಪೌರಾಯುಕ್ತರಾಗಿದ್ದ ಎಸ್.ವಿ. ರಾಮದಾಸ್ ಅವರು ಜವಾಬ್ದಾರಿಯುತವಾದ ಪೌರಾಯುಕ್ತರ ಹುದ್ದೆಯನ್ನು ನಿರ್ವಹಿಸಲು ವಿಫಲರಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪೌರಾಯುಕ್ತ ಹುದ್ದೆಯ ಕರ್ತವ್ಯದಿಂದ ಬಿಡುಗಡೆ ಗೊಳಿಸಿ ಆದೇಶ ನೀಡಿದ್ದಾರೆ. ನಗರಸಭಾ ಪೌರಾಯುಕ್ತ ರಾಮದಾಸ್ ಅವರು 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ನಗರಸಭಾ ವಿಶೇಷ ಕೌಸ್ಸಿಲ್ ಸಭೆಯಲ್ಲಿ ನೀಡಲಾದ ಅನುಮೋದನೆಗೆ ಬದಲಾಗಿ ನಕಲಿ ನಡವಳಿಯನ್ನು ಸಲ್ಲಿಸಿ ಕ್ರಿಯಾಯೋಜನೆಗೆ ಅನುಮತಿ ಪಡೆದುಕೊಂಡಿದ್ದು, ಈ ಸಂಬಂಧ ನಗರಸಭಾ ಅಧ್ಯಕ್ಷ ಸುರೇಶ್ ಅವರು ದೂರು ನೀಡಿದ್ದರು.