ವಿಧಾನಸೌಧದಲ್ಲಿ ಸಚಿವ ಹೆಚ್.ಕೆ ಪಾಟೀಲ್ ಅವರು, ಬಿಜೆಪಿ ಪಕ್ಷದಿಂದ ಧರ್ಮ ರಕ್ಷಣಾ ಹೋರಾಟ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಮಾತನಾಡಿ, ಧರ್ಮಸ್ಥಳ ಪವಿತ್ರ ಸ್ಥಳಕ್ಕೆ ಕಳಂಕ, ಕಪ್ಪು ಚುಕ್ಕೆ ತರುವ ಕೆಲವರು ಪ್ರಯತ್ನ ಮಾಡಿದ್ರು. ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ಪ್ರಯತ್ನವೆಲ್ಲ ತಪ್ಪು ದಾರಿ ಅನ್ನೋದು ಸಾಭೀತಾಗಿದೆ. ಧರ್ಮಸ್ಥಳ ಭಕ್ತರಿಗೆಲ್ಲ ಸಮಾಧಾನ, ನೆಮ್ಮದಿ ಮೂಡಿದೆ. ಈ ಸಂದರ್ಭದಲ್ಲಿ ಈ ವಿಚಾರವನ್ನ ರಾಜಕಾರಣಕ್ಕೆ ಉಪಯೋಗ ಮಾಡಿಕೊಳ್ಳುವವರಿಗೂ, ಇವರಿಗೂ ಏನೂ ವ್ಯತ್ಯಾಸ ಇರಲ್ಲ. ಈ ವಿಷಯ ಶ್ರದ್ಧೆ ಮೇಲೆ ಅವಲಂಬನೆ ಆಗಿದೆ.ಭಕ್ತಿ, ಭಾವನೆಗಳಿಗೆ ಬಹಳ ಹತ್ತಿರವಾದ ಸಂಬಂಧ ಇರುತ್ತೆ. ಯಾರು ಇದರಲ್ಲಿ ರಾಜಕಾರಣ ಮಾಡ್ತಿದ್ದಾರೋ ಅವರು ಪಾಪದ ಕೆಲಸ ಮಾಡಿದ ಹಾಗೆ ಎಂದರು.