ಭಾಗ್ಯನಗರ: ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡುವುದರಿಂದ ಹಣ ಹಾಗೂ ಸಮಯ ಉಳಿತಾಯ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಿದಂತಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.ಪಟ್ಟಣದ ಹೊರವಲಯದ ಹೊಸಹುಡ್ಯ ಗ್ರಾಮದ ರೈತ ಗೋವಿಂದರೆಡ್ಡಿ ಅವರ ಜಮೀನಿನಲ್ಲಿ ಬೆಳೆದಿರುವ ಮುಸಿಕಿನ ಜೋಳದ ತೋಟಕ್ಕೆ ಕೃಷಿ ಇಲಾಖೆ ವತಿಯಿಂದ ನ್ಯಾನೋ ಯೂರಿಯಾ ಸಿಂಪಡನೆ ಮತ್ತು ಡ್ರೋನ್ ಮೂಲಕ ಪ್ರಾಥಕ್ಷತೆ (ಡೆಮೋ) ಆಯೋಜಿಸಲಾಗಿದ್ದು ಹೊಸಹುಡ್ಯ ಗ್ರಾಮದ ಅನೇಕ ರೈತರಿಗೆ ನ್ಯಾನೋ ಯೂರಿಯಾ ಸಿಂಪಡನೆ ಮತ್ತು ಡ್ರೋನ್ ಮೂಲಕ ಡೆಮೋ ಪ್ರಾಥಕ್ಷತೆ ತಿಳುವಳಿಕೆ ಮಾಡಿಕೊಡಲಾಯಿತು.