ಕಲಬುರಗಿ : ರೌಡಿಶೀಟರ್ ಶಂಕರ್ ಅಳ್ಳೋಳ್ಳಿ ಮೇಲೆ ಹಳೆ ದ್ವೇಷ ಹಿನ್ನಲೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿರೋ ಘಟನೆ ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಕ್ರಾಸ್ ಬಳಿ ನಡೆದಿದ್ದು, ಸೆ12 ರಂದು ಬೆಳಗ್ಗೆ 11 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಸಂಬಂಧಿಕರೊಂದಿಗೆ ಊಟ ಮಾಡಲು ದಾಭಾಕ್ಕೆ ಬಂದಿದ್ದ ವೇಳೆ ಶುಭಂ ಮತ್ತು ಆತನ ಸಹಚರರಿಂದ ಗುಂಡಿನ ದಾಳಿ ಮಾಡಿದ್ದು, ಈ ವೇಳೆ ತಪ್ಪಿಸಿಕೊಳ್ಳಲು 112 ಪೊಲೀಸ್ ವಾಹನದಲ್ಲಿ ರೌಡಿಶೀಟರ್ ಶಂಕರ್ ಎಸ್ಕೆಪದ ಆಗ್ತಿರೋವಾಗ ಶುಭಂ ಮತ್ತು ಸಹಚರರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಸದ್ಯ ಗಂಭೀರ ಗಾಯಗೊಂಡ ಶಂಕರ್ ಅಳ್ಳೋಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.