ಅಸ್ಸಾಂ ರಾಜ್ಯದ ಮೋರಿಗಾವ್ ಜಿಲ್ಲಾ ಕಾರಾಗೃಹದಲ್ಲಿ ಪೋಕೋ ಪ್ರಕರಣದಲ್ಲಿ 20 ವರ್ಷಗಳ ಕಾಲ ಸಜಾ ಅನುಭವಿಸುತ್ತಿದ್ದ ಇಬ್ಬರು ಆರೋಪಿಗಳು ಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಇವರನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಪತ್ತೆಹಚ್ಚಿ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅಸ್ಸಾಂ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತರನ್ನು ಅಸ್ಸಾಂ ರಾಜ್ಯದ ಮಿಸ್ಸಾಮರಿ ಜಿಲ್ಲೆಯ ಕಲ್ಕುಚ್ಚಿ, ಜಾಂಗಲ್ ಬಸ್ತಿ ನಿವಾಸಿ ಎಂ.ಡಿ. ಜಿಯಾರುಲ್ ಇಸ್ಲಾಂ (24) ಹಾಗೂ ಮೋರಿಗಾವ್ ಜಿಲ್ಲೆಯ ಕಾನಬೋರಿ ಗ್ರಾಮ, ಜಾಗಿರೋಡ್ ನ ನಂದಲಾಲ್ ಸರ್ಕಾರ್ (33) ಎಂಬ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.