ದಾಂಡೇಲಿ : ನಗರದ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಸಾರ್ವಜನಿಕ ಗಣೇಶೋತ್ಸವ ಆಚರಣೆಗಳ ಪೈಕಿ ಏಳನೇ ದಿನವಾದ ಇಂದು ಮಂಗಳವಾರ ಶ್ರೀ ಗಣೇಶನ ಭವ್ಯ ವಿಸರ್ಜನಾ ಮೆರವಣಿಗೆಯು ಸಂಭ್ರಮ, ಸಡಗರ ಹಾಗೂ ಶಿಸ್ತುಬದ್ಧವಾಗಿ ಜರುಗಿತು. ನಗರದಲ್ಲಿ ಒಟ್ಟು ಎಂಟು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಶ್ರೀ ಗಣೇಶನ ವಿಸರ್ಜನಾ ಮೆರವಣಿಗೆಯು ಅತ್ಯಂತ ಸಂಭ್ರಮಾಚರಣೆ ಹಾಗೂ ಶ್ರದ್ಧಾ ಭಕ್ತಿಯ ಜೊತೆ ಜೊತೆಗೆ ಡಿಜೆಯ ಅಬ್ಬರವಿಲ್ಲದೆ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಇದೇ ಮೊದಲ ಬಾರಿಗೆ ನಡೆಯಿತು.