ಪರಿಚಯವಿದ್ದರೂ ತನ್ನೊಂದಿಗೆ ಮಾತನಾಡದಿದ್ದ ಕಾರಣಕ್ಕೆ ವಿದ್ಯಾರ್ಥಿನಿಯನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಅನ್ಯ ಧರ್ಮದ ಯುವಕನೊಬ್ಬನನ್ನು ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಪಟ್ಟಣದ ನಿವಾಸಿ ಅಯೂಬ್, ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಗುಂಡ್ಲುಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ಕೇಂದ್ರವೊಂದರ ವಿದ್ಯಾರ್ಥಿನಿಯೊಬ್ಬಳು ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿನಿಯಹೇಳಿಕೆಯ ಪ್ರಕಾರ, ಅವರು ಹಿಂದೆ ಪಟ್ಟಣದ ಖಾಸಗಿ ಪದವಿ ಕಾಲೇಜಿನಲ್ಲಿ ಕಲಿತಾಗ ಅಯೂಬ್ ತಮ್ಮ ಸ್ನೇಹಿತನಾಗಿ ಪರಿಚಯಗೊಂಡಿದ್ದನು.ನಂತರ ಸ್ನೇಹ ಮುಂದುವರೆಯಲು ಆಕೆ ಬ್ರೆಕ್ ಹಾಕಿದ್ದ ಕಾರಣಕ್ಕೆ ಈ ಘಟನೆ ನೆಡೆದಿದೆ