ಕಳೆದ ಬಾರಿ ತುಮಕೂರು ದಸರಾಗಾಗಿ ಮಹಾನಗರ ಪಾಲಿಕೆ ನಿಧಿಯಿಂದ ಅಂದರೆ ಜನರ ತೆರಿಗೆ ಹಣದಿಂದ 50 ಲಕ್ಷ ರೂ.ಗಳನ್ನ ಖರ್ಚು ಮಾಡಿ ಅಧಿಕಾರ ದುರುಪಯೋಗವಾಗಿದೆ ಎಂದು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜ್ ಗಂಭೀರ ಆರೋಪ ಮಾಡಿದರು.ತುಮಕೂರು ನಗರದ ರಾಮಮಂದಿರ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 1 ರ ಸಮಯದಲ್ಲಿ ಮಾತನಾಡಿದರು.ಕೇಂದ್ರ ರಾಜ್ಯ ಸರ್ಕಾರದ ಅನುದಾನದಲ್ಲಿ ದಸರಾಗೆ ಹಣ ಖರ್ಚು ಮಾಡಬೇಕು ಅಂತ ಜಿಲಾಧಿಕಾರಿ ಆದೇಶವಿದ್ದರು ಪಾಲಿಕೆ ಅಧಿಕಾರಿಗಳು ಯಾರನ್ನೋ ಮೆಚ್ಚಿಸಲು ಜನರ ತೆರಿಗೆ ಹಣ 50 ಲಕ್ಷ ರೂ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.