ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರರ ಜನ್ಮದಿನ‘ ಈದ್ ಮೀಲಾದ್’ ಅಂಗವಾಗಿ ಸೆ.5ರಂದು ಉಳ್ಳಾಲ ಜುಮ್ಮಾ ಮಸ್ಜಿದ್ ಮತ್ತು ಹಝ್ರತ್ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಆಶ್ರಯದಲ್ಲಿ ಬೃಹತ್ ಸ್ವಲಾತ್ ಮೆರವಣಿಗೆ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಲಾತ್ ಮೆರವಣಿಗೆಯಲ್ಲಿ ಉಳ್ಳಾಲದ 27 ಮೊಹಲ್ಲಾಗಳ ಮತ್ತು 32 ಮದ್ರಸಗಳ ವಿದ್ಯಾರ್ಥಿಗಳು ಹಾಗೂ ಉಳ್ಳಾಲ ಮೊಹಲ್ಲಾ ನಿವಾಸಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.