ಕೊಪ್ಪಳ ನಗರದ ಬಸವೇಶ್ವರ ಸರ್ಕಲ್ ಬಳಿ ಹಿಂದೂ ಯುವ ಸೇನೆ ವತಿಯಿಂದ ಗಣೇಶ ಪ್ರತಿಷ್ಠಾಪನೆಗೆ ಮುಂದಾದ ಯುವಕರಿಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡಿ ಹಿಂದೂ ಯುವಸೇನೆ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ರವಿವಾರ ಸಂಜೆ ಬಸವೇಶ್ವರ ಸರ್ಕಲ್ ಬಳಿ ಸೇರಿ ಹಿಂದೂ ಯುವಸೇನೆ ಕಾರ್ಯಕರ್ತರು ಪೊಲೀಸರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ, ಇದೆ ಜಾಗದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡ್ತಿವಿ ಎಂದು ಸವಾಲು ಹಾಕಿದ್ದಾರೆ...