ಕಳೆದ ಮೂರು ದಿನಗಳ ಹಿಂದೆಯಷ್ಟೇ ನಿಧನರಾದ ಆರ್ಯ ಸಮಾಜದ ರಾಷ್ಟ್ರೀಯ ಕಾರ್ಯಕಾರಣಿ ದಿ. ಸುಭಾಷ್ ಅಷ್ಠಿಕರ್ ಅವರ ಹುಮ್ನಾಬಾದ್ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಕಂಡ್ರೆ ಅವರು ಮಂಗಳವಾರ ಸಂಜೆ 7ಕ್ಕೆ ಭೇಟಿ ನೀಡಿ ಅವಲಂಬಿತರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಕೇಶವರಾವ್ ತಳಘಟಕರ್, ದಿಲೀಪಕುಮಾರ ತಾಳಂ ಪ್ಪಳ್ಳಿ, ತುಂಬಾ ಸೇರಿದಂತೆ ಇನ್ನೂ ಅನೇಕ ಜನ ಗಣ್ಯರು ಹಾಜರಿದ್ದರು.