ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತಾಲೂಕಿನ ಧುಮುಸೂರಿನಲ್ಲಿ ಮನೆಗಳ ಗೋಡೆ ಕುಸಿದು ಹಾನಿ ಸಂಭವಿಸಿದೆ. ಹಾನಿ ಗಿಡದ ಮನೆಗಳು ಸರಸ್ವತಿ ಶಂಕರ್ ನಂದಗಾವ್ ಹಾಗೂ ರೇಣುಕಾ ಆನಂದ್ ಅವರಿಗೆ ಸೇರಿದವುಗಳಾಗಿವೆ ವಿಷಯ ತಿಳಿದು ಬೆಳಿಗ್ಗೆ 8:30 ಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾ. ಪಂ ಅಧ್ಯಕ್ಷ ವೀರಪ್ಪ ಭೂತಾಳೆ ಸರ್ಕಾರದಿಂದ ಪರಿಹಾರ ಕೊಡಿಸುವುದರ ಜತೆಗೆ ಪಕ್ಕ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.