ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಆಗಷ್ಟ್ 30 ಮತ್ತು 31 ರಂದು ನಡೆದ 4ನೇ ಸೌತ್ ಇಂಡಿಯಾ ಜೋನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ಕರಾಟೆ ಪಟುಗಳ ಜೊತೆ ಸೆಣಸಾಡಿದ ಬಾಗಲಕೋಟೆಯ ಪವನ್ ಸಿಂದಗಿಕರ ಕಟಾ ವಿಭಾಗದಲ್ಲಿ ಚಿನ್ನ, ವೈಭವ ಚೌಹಾಣ್ ಪೈಟಿಂಗ್ ವಿಭಾಗದಲ್ಲಿ ಚಿನ್ನ ಮತ್ತು ಗೌತಮ್ ಬಾಬರ್ ಪೈಟಿಂಗ್ ವಿಭಾಗದಲ್ಲಿ ಕಂಚು ಪಡೆದಿದ್ದು, ಜಯಂತ್ ಗೋರಗುಂಡಗಿ, ಮಹಮ್ಮದ್ ನೂಮಾನ್ ಭಂಡಾರಿ ಮತ್ತು ಅಮಿತ್ ರಾಠೋಡ ಉತ್ತಮ ಪ್ರದರ್ಶನ ನೀಡಿ ಸಮಾಧಾನಕರ ಬಹುಮಾನ ಪಡೆದು ಬಾಗಲಕೋಟೆ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.