ದಾಂಡೇಲಿ : ಬಿಎಸ್ಎನ್ಎಲ್ ಸಂಸ್ಥೆಯು ಆಗಸ್ಟ್ .01ರಿಂದ ಆಗಸ್ಟ್ 31ರವರೆಗೆ ಒಂದು ರೂಪಾಯಿಗೆ ಒಂದು ಸಿಮ್ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳುವಂತೆ ಬಿಎಸ್ಎನ್ಎಲ್ ಕಿರಿಯ ಅಭಿಯಂತರೆ ಕಲ್ಪನಾ ಅವರು ಗುರುವಾರ ಸಂಜೆ ಐದು ಗಂಟೆ ಸುಮಾರಿಗೆ ಮಾಧ್ಯಮದ ಮೂಲಕ ವಿನಂತಿಸಿದ್ದಾರೆ. ಒಂದು ರೂಪಾಯಿಯ ಈ ಸಿಮ್ ನಲ್ಲಿ ಒಂದು ತಿಂಗಳುಗಳ ಕಾಲ ಅನಿಯಮಿತ ಕಾಲ್ ಹಾಗೂ ಪ್ರತಿದಿನ ಎರಡು ಜಿಬಿ ಡೇಟಾ ಉಚಿತವಾಗಿ ಇರುತ್ತದೆ. ಈ ವಿಶೇಷ ಅವಕಾಶ ಇದೆ ಆಗಸ್ಟ್ 31ರವರೆಗೆ ಮಾತ್ರ ಇದ್ದು ಸಿಮ್ ಬೇಕಾದವರು ಬಿಎಸ್ಎನ್ಎಲ್ ಕಚೇರಿ ಇಲ್ಲವೇ ಬಿಎಸ್ಎನ್ಎಲ್ ಗ್ರಾಹಕರ ಕೇಂದ್ರಕ್ಕೆ ಆಧಾರ್ ಕಾರ್ಡ್ ಜೊತೆ ಬಂದು ಸಿಮ್ ನ್ನು ಪಡೆದುಕೊಳ್ಳಬಹುದು ಎಂದರು.