ಗಣಪತಿ ವಿಸರ್ಜನೆ ವೇಳೆ ಜನರೇಟರ್ ಬ್ಲಾಸ್ಟ್ ಆಗಿ ಸಾಗರ ತಾಲೂಕಿನ ಡಿಗಟ್ಟೆ ಕೊಪ್ಪ ಗ್ರಾಮದ ಲೋಕೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಕಾಯಿಕೊಂಡಿದ್ದ ಲೋಕೇಶ್ ಅವರನ್ನ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ ದಾಖಲಿಸಲಾಗಿದ್ದು, ಭಾನುವಾರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವ ಲೋಕೇಶ್ ಅವರ ಆರೋಗ್ಯವನ್ನು ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.