ಮುಳವಾಡ ಏತ ನೀರಾವರಿ ಯೋಜನೆಯಡಿ ವಡವಡಗಿ ಕೆರೆ ತುಂಬುವ ಕಾಮಗಾರಿ ಸಂಪೂರ್ಣ ಮಾಡದೇ ಗುತ್ತಿಗೆದಾರ ಅರ್ಧಕ್ಕೆ ಬಿಲ್ ಸಂದಾಯ ಮಾಡಿಕೊಂಡಿದ್ದು, ಇತ್ತ ಕಾಲುವೆ ಮೂಲಕ ನೀರು ಸರಾಗವಾಗಿ ಹೋಗದೇ ಸಂಪೂರ್ಣ ರೈತನ ಜಮೀನಿನಲ್ಲಿ ನೀರು ಹೋಗಿ ನಿಂತು ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸೋಮನಾಳ ಗ್ರಾಮದ ರೈತ ಮಂಜುನಾಥನ ಭೂಮಿಯಲ್ಲಿನ ಬೆಳೆಗಳು ಹಾಳಾಗಿ ಹೋಗುತ್ತಿದ್ದು ಸೂಕ್ತ ಪರಿಹಾರಕ್ಕೆ ರೈತ ಕಳೆದ ಹಲವು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.