ಶ್ರಾವಣ ಮಾಸದ ಕಡೆಯ ಶನಿವಾರವನ್ನು ಶಿಡ್ಲಘಟ್ಟ ತಾಲೂಕಿನಲ್ಲಿ ವಿಶೇಷವಾಗಿ ಆಚರಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಹೊಸಹುಡ್ಯದ ಶ್ರೀಕ್ಷೇತ್ರ ಶಾಂತಿಧಾಮದ ಶ್ರೀಶನೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು ನೀಡಿದ ೧೧೪೮ ಲೀಟರ್ ಹಾಲಿನ ಅಭಿಷೇಕ ನಡೆಯಿತು.ಸ್ವಾಮಿಗೆ ಅಭಿಷೇಕ ನೆರವೇರಿಸಿದ ಅಭಿಷೇಕದ ಹಾಲಿನಲ್ಲೇ ಭಕ್ತರು ನೀಡಿದ ಅಕ್ಕಿ ಬಳಸಿ ತಯಾರು ಮಾಡಿದ ಪ್ರಸಾದವನ್ನು ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತರಿಗೂ ವಿತರಿಸಲಾಯಿತು.