ವ್ಯಸನಮುಕ್ತ ಛಾಯಾಗ್ರಾಹಕರನ್ನು ಸಮಾಜ ಸದಾ ಗೌರವದಿಂದ ಕಾಣುತ್ತದೆ ಎಂದು ಹಿರೇಮಠ ಪೀಠಾಧಿಪತಿ ವೀರರೇಣುಕ ಗಂಗಾಧರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಮಾಣಿಕನಗರ ರಸ್ತೆ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಛಾಯಾಗ್ರಾಹಕರ ಸಂಘದ ತಾಲೂಕು ಘಟಕ ಶನಿವಾರ ಮಧ್ಯಾಹ್ನ 3ಕ್ಕೆ ಏರ್ಪಡಿಸಿದ 186ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.