ದಾಂಡೇಲಿ : ಬಂಗೂರನಗರ ಪದವಿ ಮಹಾವಿದ್ಯಾಲಯ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಭಗತ್ ಸಿಂಗ್ ಯುವ ಬಳಗ, ಸೇವಾ ಸಂಕಲ್ಪ ತಂಡ ದಾಂಡೇಲಿ, ಲಯನ್ಸ್ ಕ್ಲಬ್ ದಾಂಡೇಲಿ, ಶೇಖರ್ ಆಸ್ಪತ್ರೆ ಮತ್ತು ಧಾರವಾಡದ ರಕ್ತ ಭಂಡಾರ ಕೇಂದ್ರದ ಸಂಯುಕ್ತ ಆಶ್ರಯದಡಿ ಆ.25 ರಂದು ಬೆಳಿಗ್ಗೆ 9:30 ಗಂಟೆಯಿಂದ ನಗರದ ಬಂಗೂರನಗರ ಪದವಿ ಮಹಾವಿದ್ಯಾಲದಲ್ಲಿ ರಕ್ತದಾನ ಮತ್ತು ಉಚಿತ ರಕ್ತ ಗುಂಪು ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬಂಗೂರನಗರ ಪದವಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ಎಸ್.ಎಸ್.ಹಿರೇಮಠ ಅವರು ತಿಳಿಸಿದ್ದಾರೆ. ಅವರು ಇಂದು ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ದಾಂಡೇಲಿ ನಗರದ ಶೇಖರ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.