ನಿರಂತರ ಸುರಿದ ಮಳೆಯಿಂದ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಕೆರೆಯ ಕೋಡಿ ಇಂದ ಕಾರ್ಯಕ್ರಮದಲ್ಲಿ ನೀರು ಹರಿಯುತ್ತಿದ್ದು ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ನೀರಲ್ಲಿ ನಡೆದಾಡುವಂಥಾಗಿದೆ. ಜಾನುವಾರಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದು ಪರದಾಟವನ್ನು ನಡೆಸುತ್ತಿವೆ. ಈ ಸ್ಥಳಕ್ಕೆ ಶುಕ್ರವಾರ ಮಧ್ಯಾನ ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ಭೇಟಿ ನೀಡಿ, ಸರ್ಕಾರ ಕೂಡಲೇ ಈ ಸೇತುವೆ ಮೇಲ್ದರ್ಜೆಗೇರಿಸಬೇಕು ಹಾಗೂ ಜಿಲ್ಲೆಯಾದ್ಯಂತ ನಿರಂತರ ಸುರಿದ ಮಳೆಗೆ ಬೆಳೆ ಹಾನಿಯಾಗಿದ್ದು ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.