ತುಮಕೂರು ನಗರದ ಎಸ್ ಎಸ್ ಐ ಟಿ ಕಾಲೇಜು ಬಳಿ ಇರುವ 50 ರಿಂದ 60 ಕೋಟಿ ಮಾರುಕಟ್ಟೆ ಮೌಲ್ಯವಿರುವ ಭೂಮಿಯನ್ನ ಕಾನೂನು ಬಾಹಿರವಾಗಿ ಕೇವಲ 17 ಲಕ್ಷ ರುಗಳಿಗೆ ಕಾಂಗ್ರೆಸ್ ಭವನ ಟ್ರಸ್ಟ್ ಬೆಂಗಳೂರು ಹೆಸರಿನಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಕ್ರಮವಾಗಿ ನೋಂದಣಿ ಮಾಡಲಾಗಿದೆ. ಈ ಬಗ್ಗೆ ತುಮಕೂರಿನ ಅಶೋಕ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ 11 ರ ಸಮಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಗಂಭೀರ ಆರೋಪ ಮಾಡಿದರು. ಈ ಭೂಮಿ ಪರಬಾರೆ ಮಾಡುವಾಗ ಹಂತ ಹಂತವಾಗಿಯೂ ಕಾನೂನು ಉಲ್ಲಂಘನೆಯಾಗಿದೆ ಎಂದರು.