ಎಸ್ ಸಿ ಸಮಾಜಕ್ಕೆ ರುದ್ರಭೂಮಿ ಜಾಗ ಮಂಜೂರಾತಿಗೆ ಒತ್ತಾಯಿಸಿ ನಾಯಿ ತೇಗೂರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮೃತಪಟ್ಟವರಿಗೆ ಊರ ಹೊರಗೆ ಅಥವಾ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನಡೆಸುವ ದುಸ್ಥಿತಿಯನ್ನು ತಪ್ಪಿಸಲು ರುದ್ರಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕಿತ್ತೂರು ತಾಲೂಕಿನ ತಿಗಡೋಳ್ಳಿ ಗ್ರಾಪಂ ವ್ಯಾಪ್ತಿಯ ನಾಯಿ ತೇಗೂರ ಗ್ರಾಮದ ಎಸ್ ಸಿ ಸಮುದಾಯ ಮೃತಪಟ್ಟವರಿಗೆ ರುದ್ರಭೂಮಿ ಜಾಗ ಮಂಜೂರಾತಿಗೆ ಆಗ್ರಹಿಸಿದರು