ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವ ಮೂಲಕ ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯಪುರ ನಗರದಲ್ಲಿ ಬಂಜಾರ ಸಮಾಜದ ಮುಖಂಡರುಗಳು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು. ಎಡಗೈ ಹಾಗೂ ಬಲಗೈಗೆ ಸಮಾನ ಮೀಸಲಾತಿ ನೀಡಿ ಬಂಜಾರ ಸಮಾಜಕ್ಕೆ ಕೇವಲ 1% ಮೀಸಲಾತಿ ನೀಡಿ ಅನ್ಯಾಯ ಮಾಡಿದ್ದಾರೆ ಇದರಿಂದ ಬಂಜಾರ ಸಮಾಜಕ್ಕೆ ದೊಡ್ಡ ಹೊಡೆತವಾಗಿದೆ ಎಂದು ವಿಜಯಪುರ ನಗರದಲ್ಲಿ ಶನಿವಾರ ಸಾಯಂಕಾಲ 4ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳು ತಮ್ಮ ಆಕ್ರೋಶ ಅವರ ಹಾಕಿದರು. ಕೂಡಲೇ ಮೀಸಲಾತಿ ತಾರತಮ್ಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.