ಮತ ಕಳ್ಳತನ ಮಾಡಿ ಚುನಾವಣಾ ಅಕ್ರಮಗಳನ್ನು ನಡೆಸುತ್ತಿರುವ ಬಿಜೆಪಿ ವಿರುದ್ಧ ರಾಹುಲ್ ಗಾಂಧಿರವರ ನೇತೃತ್ವದಲ್ಲಿ ನಡೆಯುತ್ತಿರುವ ವೋಟ್ ಚೋರಿ ಗದ್ದಿ ಚೋಡ್ ಹೋರಾಟದ ಮುಂದುವರಿದ ಭಾಗವಾಗಿ ಕೋಲಾರ ನಗರದಲ್ಲಿ ದಿನಾಂಕ 07/09/2025 ಭಾನುವಾರ ಸಂಜೆ 06:00 ಗೆ ETCM ಆಸ್ಪತ್ರೆ ಸರ್ಕಲ್ ನಿಂದ ಬಾಯ್ಸ್ ಕಾಲೇಜು ಸರ್ಕಲ್ ವರೆಗೆ ಬೃಹತ್ ಪಂಜಿನ ಮೆರವಣಿಗೆ ಮತ್ತು ಬಹಿರಂಗ ಸಭೆ ಯನ್ನು ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಉದಯ್ ಬಾನು ಚೀಬ್, ಕರ್ನಾಟಕ ಉಸ್ತುವಾರಿ ನಿಗಮ್ ಬಂಡಾರಿ,ರಾಜ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್, ರಾಜ್ಯ ನಾಯಕರು,ಜಿಲ್ಲಾ,ಅಸೆಂಬ್ಲಿ, ಬ್ಲಾಕ್ ಸಮಿತಿಗಳ ಪದಾಧಿಕಾರಿಗಳು ಇರಲಿದ್ದಾರೆ ಎಂದ್ರು